top of page

Covid relief fund

ಮನುಕುಲದ ಅತ್ಯಂತ ಕರಾಳ ಸ್ಥಿತಿಯೆಂದರೆ, ನಮ್ಮ  ಹಾಗೂ ನಮ್ಮವರ ಜೀವವುಳಿಸಿಕೊಳ್ಳಲು ಹಾತೊರೆಯುವಂತಹ ಪರಿಸ್ಥಿತಿ.  ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ತಾಯಿನಾಡು, ಕೊರೋನಾದ ಭೀಕರತೆಗೆ ಬಲಿಯಾಗಿ, ಉಸಿರುಗಟ್ಟಿಸುವಂತಹ ಸ್ಥಿತಿಯಲ್ಲಿ ನರಳಾಡುತ್ತಿರುವ ದೃಶ್ಯಗಳು ಹೃದಯವಿದ್ರಾವಕ. ಇವೆಲ್ಲವನ್ನು ಕೇಳುವುದಕ್ಕೇ ಇಷ್ಟುಭಯಾನಕವಾಗಿರುವಾಗ , ಅದರೊಂದಿಗೆ ಹತಾಶರಾಗಿ ಜೀವಿಸುತ್ತಿರುವ ಜೀವಗಳನ್ನು ನೆನೆದರೆ ಎದೆಬಿರಿಯುತ್ತದೆ. ಕುಟುಂಬಗಳೇ ಕಣ್ಣೆದುರಿಗೆ ಕರಗಿ ಹೋಗುತ್ತಿರುವಾಗ, ಬದುಕುವ ಕನಸುಗಳೇ ಕಮರಿ ಹೋಗುತ್ತಿರುವಾಗ, ಅವರ ಸಾವು, ನೋವು, ಆಕ್ರಂದನಗಳಿಗೆ ಸ್ಪಂದಿಸದೇ ಹೋದರೆ ಮಾನವತೆಗೆ ಅರ್ಥವಿದೆಯೇ? ಬನ್ನಿ ನಾವೆಲ್ಲರೂ ಅವರ ಬಲವಾಗೋಣ. ನಮ್ಮ ಸಣ್ಣ ಸಹಾಯ, ಹತ್ತಾರು ಜೀವಗಳಿಗೆ ಸಂಜೀವಿನಿಯಾದರೆ, ನಮ್ಮ ಬದುಕು ಕೂಡ ಸಾರ್ಥಕವಲ್ಲವೇ?  ತಾಯಿನೆಲದಿಂದ ದೂರವಿದ್ದರೂ ಕನ್ನಡತೆಯನ್ನು ಎತ್ತಿ ಹಿಡಿಯೋಣ!!!

ಭಾರತೀಯರಾಗಿ ಭಾರತೀಯತೆಯನ್ನು ಮೆರೆಯೋಣ!!!.        

ನಮ್ಮವರಿಗೆ ನೆರವಾಗೋಣ!!!

More resources are needed now to respond to the outbreak in India, which has stretched the country's healthcare system to its limit. There is not enough space in hospitals to help everyone in need, and life-saving supplies, such as oxygen and ventilators, are in short supply. Thousands of people are at risk of being left to die without help.

 

HKK is working closely with several organizations to distribute the fund and more details to follow

Total Collected -  $15,000*
* Total amount collected from all sources (website, check, benevity etc.)
CovidFundRaise.jpeg
CovidFundRaise_2.jpeg
bottom of page