Go Green Concept
ವಿಶಾಲ ವಿಶ್ವದಲ್ಲಿ ನಮ್ಮ ಈ ಭೂಮಿ ಒಂದು ಭವ್ಯವಾದ ಜಾಗ. ತುಂಬಾ ಸಂಕೀರ್ಣವಾದ ಪರಿಸರ ವ್ಯವಸ್ಥೆಗೆ ಆಶ್ರಯವಿತ್ತಿರುವ ಈ ಭೂಮಾತೆಯ ಯಶಸ್ಸಿನ ರಹಸ್ಯ ತುಂಬಾ ನಿಗೂಢ ಮತ್ತು ಅಷ್ಟೇ ವಿಸ್ಮಯಕಾರಿ ಕೂಡ. ಈತ್ತೀಚೆಗೆ ಅಷ್ಟೇ ನಾವು ಈ ಪರಿಸರ ಸಮತೋಲನದ ರಹಸ್ಯವನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತ್ತ ಇದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಕಡೆಗೆ ಆಚರಿಸುವ ಭೂ ಮಾತೆಯ ದಿನಾಚರಣೆಯ ಸಂಭ್ರಮಕ್ಕೆ ಹೊಯ್ಸಳ ಕನ್ನಡ ಕೂಟವು ಕೈ ಜೋಡಿಸುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಅತ್ಯಗತ್ಯ.